logo

ಹಿಂದುಳಿದ ವರ್ಗಗಳ ಮುಕ್ತಿಧಾಮ ಅಭಿವೃದ್ಧಿ ಸಮೀತಿ ಬ್ಯಾಡಗಿ, ಪದಗ್ರಹಣ

ಬ್ಯಾಡಗಿ ಪಟ್ಟಣದ ಮಹರ್ಷಿ ವಾಲ್ಮೀಕಿ ಭವನದಲ್ಲಿ ನೂತನ ಹಿಂದುಳಿದ ಮತ್ತು ದಲಿತ ವರ್ಗಗಳ ಮುಕ್ತಿಧಾಮ ಅಭಿವೃದ್ಧಿ ಸಮಿತಿ ರಿ. ಬ್ಯಾಡಗಿ ಇದರ ಉದ್ಘಾಟನೆ ಹಾಗೂ ಸಮಿತಿಯ ನೂತನ ಪದಾಧಿಕಾರಿಗಳ ಮತ್ತು ಸದಸ್ಯರ ಪದಗ್ರಹಣ ಸಮಾರಂಭ ನಡೆಯಿತು
ಹಿಂದುಳಿದ ಮತ್ತು ದಲಿತ ವರ್ಗಗಳ ಮುಕ್ತಿಧಾಮ ಅಭಿವೃದ್ಧಿ ಸಮಿತಿ ಉದ್ಘಾಟನೆ ನಂತರ ಸಮಿತಿಯ ನೂತನ ಪದಾಧಿಕಾರಿಗಳಾದ ಗೌರವಾಧ್ಯಕ್ಷರಾಗಿ ಎಂ ಡಿ ಚಿಕ್ಕಣ್ಣನವರ, ಅಧ್ಯಕ್ಷರಾಗಿ ದುರ್ಗೇಶ ಗೋಣೆಮ್ಮನವರ, ಕಾರ್ಯದರ್ಶಿಯಾಗಿ ಮೋಹನಕುಮಾರ ಹುಲ್ಲತ್ತಿ, ಖಜಾಂಚಿಯಾಗಿ ಮಂಜುನಾಥ ಉಪ್ಪಾರ, ಉಪಾಧ್ಯಕ್ಷರಾಗಿ ವಿಷ್ಣುಕಾಂತ ಬೆನ್ನೂರ ಮತ್ತು ಗೋಣೆಪ್ಪ ಅಡಿನವರ, ಸಹ ಕಾರ್ಯದರ್ಶಿಯಾಗಿ ವಿನಯನಾಥ ರಾವಳ, ಸಂಘಟನಾ ಕಾರ್ಯದರ್ಶಿಯಾಗಿ ನಿಂಗಪ್ಪ ಕೋಡಿಹಳ್ಳಿ, ಸಂಜೀವ ಮಡಿವಾಳರ, ಮಂಜುನಾಥ ಹಂಜಗಿ, ಹಾಗೂ ಇನ್ನಿತರ ಇತ್ತು 31 ಸದಸ್ಯರನ್ನು ಒಳಗೊಂಡ ಸಮಿತಿಯು ಮಾನ್ಯ ಶಾಸಕರು, ಮಾಜಿ ಶಾಸಕರ ಮತ್ತು ತಹಶೀಲ್ದಾರರು, ಪುರಸಭೆ ಮುಖ್ಯ ಅಧಿಕಾರಿಗಳ ಸಮಕ್ಷಮ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಪದಗ್ರಹಣ ಪಡೆದುಕೊಂಡರು.
ನಂತರ ಸಮಿತಿಯ ಖಜಾಂಚಿ ಶ್ರೀ ಮಂಜುನಾಥ ಉಪ್ಪಾರ ಸಮಿತಿಯಿಂದ ಮುಂದೆ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಯೋಜನಾ ವರದಿ ಮಂಡಿಸಿದರು. ಇರುವ ಮುಕ್ತಿಧಾಮದ ಹಳೆಯ ಮಣ್ಣನ್ನು ಸಂಪೂರ್ಣವಾಗಿ ತೆಗೆದು ಹೊಸದಾಗಿ ಕೆಂಪು ಮಣ್ಣನ್ನು ಹಾಕಿಸುವುದು, ನೀರಿನ ವ್ಯವಸ್ಥೆ, ಹೈ ಮ್ಯಾಕ್ಸ್ ದೀಪ ಕಂಬಗಳ ವ್ಯವಸ್ಥೆ, ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ, ಶಿವನ ಮಂದಿರದ ನಿರ್ಮಾಣ, ಈಗಿರುವ ಗಿಡಗಳನ್ನು ರಕ್ಷಿಸುವುದರ ಜೊತೆಗೆ ಇನ್ನೂ ಹೆಚ್ಚಿನ ಗಿಡಗಳನ್ನು ನೆಡುವುದು, ಹಸಿರು ವಾತಾವರಣ ನಿರ್ಮಿಸುವುದು, ಮುಖ್ಯ ದ್ವಾರ ಹಾಗೂ ಹೊಸ ಗೇಟ್ ನಿರ್ಮಿಸುವುದು, ಮುಂದೆ ಜನಸಂಖ್ಯೆಗೆ ಹೆಚ್ಚಾಗುವ ಮುಂದಾಲೋಚನೆಯಿಂದ ಹಾಗೂ ಅಂತ್ಯ ಸಂಸ್ಕಾರಕ್ಕೆ ಉಪಯೋಗವಾಗುವ ಗಿಡ ಮರಗಳನ್ನು ರಕ್ಷಿಸುವ ಸಲುವಾಗಿ ಮುಕ್ತಿಧಾಮದಲ್ಲಿ ಒಂದು ವಿದ್ಯುತ್ ಚಾಲಿತ ಅಂತ್ಯಸಂಸ್ಕಾರ ಯಂತ್ರವನ್ನು ನಿರ್ಮಾಣ ಮಾಡುವುದು, ಮತ್ತು 40 ಸಮುದಾಯಗಳಿಗೆ ಇರುವ ಏಕೈಕ ಮುಕ್ತಿಧಾಮ ಇದಾಗಿದ್ದರಿಂದ ಈಗಿರುವ ಜನಸಂಖ್ಯೆಗೆ ಇದು ಜಾಗ ಸಾಕಾಗುತ್ತಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ಈ ಎಲ್ಲ ಸಮುದಾಯಕ್ಕೆ ಬ್ಯಾಡಗಿ ಪುರಸಭೆ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆ ಜಾಗವನ್ನು ಸಮೀತಿ ಹೆಸರಿಗೆ ಮಂಜೂರಿ ಮಾಡಿಸಿಕೊಳ್ಳುವುದು ಮತ್ತು ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಉದ್ದೇಶದಿಂದ ಈ ಸಮಿತಿ ರಚನೆಗೊಂಡಿದೆ ಇದಕ್ಕೆ ಎಲ್ಲಾ ಇಲಾಖಾ ಸರ್ಕಾರಿ ಅಧಿಕಾರಿಗಳು, ಚುನಾಯಿತ ಸದಸ್ಯರು, ಶಾಸಕರು, ಪಟ್ಟಣದ ಗಣ್ಯರು ಸಹಾಯ ಸಹಕಾರ ನೀಡುವಂತೆ ವಿನಂತಿಸಿದರು.
ನಂತರ ಸೇವಾ ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ದುರ್ಗೇಶ ಗೊಣೆಮ್ಮನವರ , ಕಾರ್ಯದರ್ಶಿ ಶ್ರೀ ಮೋಹನಕುಮಾರ ಹುಲ್ಲತ್ತಿ ಮಾನ್ಯ ಶಾಸಕರಿಗೆ, ಪುರಸಭೆ ಮುಖ್ಯ ಅಧಿಕಾರಿಗಳಿಗೆ ಹಾಗೂ ತಾಲೂಕ ತಹಶೀಲ್ದಾರರಿಗೆ ನಮ್ಮ ಸಮಿತಿಗೆ 10 ಎಕರೆ ಜಾಗವನ್ನು 40 ಉಪಜಾತಿಗಳ ಮುಕ್ತಿಧಾಮದ ಸಲುವಾಗಿ ಮಂಜೂರಿ ಮಾಡಬೇಕು ಹಾಗೂ ಶಾಸಕರು ತಮ್ಮ ಅನುದಾನದಿಂದ ಹಾಗೂ ಸರ್ಕಾರದ ವಿಶೇಷ ಅನುದಾನ ಪಡೆದು ಕನಿಷ್ಠ 50 ಲಕ್ಷದ ಅನುದಾನವನ್ನು ನಮ್ಮ ಮುಕ್ತಿಧಾಮದ ಅಭಿವೃದ್ಧಿಗೋಸ್ಕರ ಮಂಜೂರಿ ಮಾಡಿಸಿಕೊಡಬೇಕು ಎಂದು ಲಿಖಿತವಾಗಿ ಮನವಿಯನ್ನು ಸಲ್ಲಿಸಿದರು.
ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದ ಸನ್ಮಾನ್ಯ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ ಈ ಹಿಂದೆ ನಾನು ಶಾಸಕನಾಗಿದ್ದಾಗ ಬ್ಯಾಡಗಿ ಪಟ್ಟಣದ ಮುಕ್ತಿಧಾಮಕ್ಕೆ ಏನಾದರೂ ಮಾಡಬೇಕು ಅಂದರೂ 40 ಉಪಜಾತಿಗೆ ಇರುವ ಏಕೈಕ ಮುಕ್ತಿಧಾಮ ಇದ್ದರೂ ಅದರ ಕಾಳಜಿ ಯಾರಿಗೂ ಇದ್ದಿಲ್ಲ ನಮ್ಮನ್ನು ಇದುವರೆಗೂ ಏನೂ ಕೇಳಿಲ್ಲ ತಡವಾದರೂ ಸರಿ ಈಗ ಜಾಗೃತಿಗೊಂಡು ಈಗ ಸಮಿತಿಯನ್ನು ರಚಿಸಿಕೊಂಡಿದ್ದೀರಿ ಆ ಪ್ರಕಾರವಾಗಿ ತಮ್ಮ ಸಮಿತಿಯಿಂದ ಹೊಸದಾಗಿ ಹತ್ತು ಎಕರೆ ಜಮೀನು ಮಂಜೂರು ನೀಡಲು ಹಾಗೂ ಶಾಸಕರ ಮತ್ತು ಸರಕಾರದ ಅನುದಾನದಿಂದ ಕನಿಷ್ಠ 50 ಲಕ್ಷ ರೂಗಳ ಈಗಿರುವ ಮುಕ್ತಿಧಾಮದ ಅಭಿವೃದ್ಧಿಗೆ ಮಂಜೂರು ಮಾಡಲು ವಿನಂತಿಸಿದ್ದೀರಿ ಇದರಂತೆ ನಾನು ಪ್ರಾಮಾಣಿಕವಾಗಿ ಅನುದಾನ ತರುವಲ್ಲಿ ಶ್ರಮಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಮಾಜಿ ಶಾಸಕ ಶ್ರೀ ಸುರೇಶ ಗೌಡ ಪಾಟೀಲ ಮಾತನಾಡಿ 40 ಉಪಜಾತಿಗಳಿಗೆ ಇರುವ ಏಕೈಕ ಮುಕ್ತಿ ಧಾಮದ ಅಭಿವೃದ್ಧಿಗೆ ಕಾಳಜಿ ವಹಿಸಿ ಇಂದು ಸಮಿತಿ ರಚನೆಗೊಂಡು ಪದಗ್ರಹಣ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಇದು ಎಷ್ಟೋ ವರ್ಷ ಹಿಂದೆಯೇ ಆಗಬೇಕಿತ್ತು ಸಮುದಾಯಗಳಲ್ಲಿ ಒಗ್ಗಟ್ಟಿನ ಕೊರತೆ ಹಿತಾಸಕ್ತಿಯ ಕೊರತೆಯಿಂದ ಹೀಗೆ ಸಮಾಜದಲ್ಲಿ ಹಿನ್ನಡೆ ಆಗುತ್ತದೆ. ನಿಮ್ಮಂತಹ ಯುವಕರು ಇಂಥ ಸೇವೆ ಮಾಡಲು ಆಸಕ್ತಿ ತೋರಿದ್ದು ತುಂಬಾ ಹೆಮ್ಮೆಯ ವಿಷಯ. ಈಗಿನ ಶಾಸಕರು ಕೆಲಸಗಾರರಾಗಿದ್ದಾರೆ ತಮ್ಮ ಬೇಡಿಕೆಯು ಅವರಿಂದ ಖಂಡಿತವಾಗಿಯೂ ಈಡೇರುತ್ತದೆ. ನಾನು ವರ್ತಕ ಸಂಘದ ಎಲ್ಲ ಸದಸ್ಯರ ಹಾಗೂ ವರ್ತಕರ ಒಪ್ಪಿಗೆಯ ಮೇರೆಗೆ ತುಂಬಾ ದೂರ ದೃಷ್ಟಿ ಇಟ್ಟುಕೊಂಡು ನಾಲ್ಕೂವರೆ ಎಕರೆ ಜಮೀನನ್ನು ಪಡೆದು ಜಿಲ್ಲೆಯಲ್ಲಿಯೇ ಒಂದು ಮಾದರಿ ವೀರಶೈವ ಮುಕ್ತಿಧಾಮವನ್ನಾಗಿ ಮಾಡಿದ್ದೇವೆ ಇದಕ್ಕಾಗಿ ವರ್ತಕ ಸಂಘ ತಿಂಗಳಿಗೆ ಎರಡು ಲಕ್ಷ ಖರ್ಚು ಮಾಡುತ್ತದೆ. ಅದರಂತೆಯೂ ಸಹ ನಿಮ್ಮ ಎಲ್ಲ ಸಮುದಾಯದ ಏಕೈಕ ಮುಕ್ತಿಧಾಮ ಅಭಿವೃದ್ಧಿ ಹೊಂದಲಿ. ಈ ಅಂತ್ಯ ಸಂಸ್ಕಾರ ಕೆಲಸ ಮಾಡುವವರಿಗೆ ಇದುವರೆಗೂ ನಮ್ಮ ವರ್ತಕ ಸಂಘವು ತಿಂಗಳಿಗೆ 3000 ಸಂಬಳ ಮಾಡುತ್ತಾ ಬಂದಿದೆ ಹಾಗೂ ಈ ಅಭಿವೃದ್ಧಿಗೆ ನಮ್ಮ ವರ್ತಕರ ಸಂಘವು ಸಹಿತ ಮುಂದೆ ಹಣ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ ಇಂದು 40 ಉಪಜಾತಿಗಳು ಸೇರಿಕೊಂಡು ಮುಕ್ತಿದಾಮದ ಅಭಿವೃದ್ಧಿ ಸಲುವಾಗಿ ಸಮಿತಿ ರಚನೆ ಮಾಡಿ ಜನಪರ ಕಾಳಜಿಯನ್ನು ತೋರಿದ್ದೀರಿ ಇದು ತುಂಬಾ ಶ್ಲಾಘನೀಯ ಇದಕ್ಕೆ ಪಟ್ಟಣದ ಎಲ್ಲಾ ಗಣ್ಯ ವ್ಯಕ್ತಿಗಳು ಅದರಂತೆ ನಾನು ಸಹ ತಮ್ಮ ಎಲ್ಲ ಕೆಲಸಗಳಲ್ಲಿ ಮುಂದೆ ನಿಂತು ಸಹಾಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಮುಕ್ತಿದಾಮದ ಮಹಾಮಾತೆಯಾದ ಶ್ರೀಮತಿ ಆಶಾ ವೆಂಕಟಸ್ವಾಮಿ ಇವರು ವಿಶೇಷವಾಗಿ ಅನಾಥ ಹಾಗೂ ಬಡ ಸುಮಾರು 5000 ಶವಗಳಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ ಅಂತ್ಯ ಸಂಸ್ಕಾರಕ್ಕೆ ಬಹಳಷ್ಟು ಸಹಾಯ ನೀಡಿದ್ದಾರೆ ಇವರು ಆಂಬುಲೆನ್ಸ್ ಡ್ರೈವರ್ ಆಗಿ ಸಹ ಕೆಲಸ ನಿರ್ವಹಿಸಿದ್ದಾರೆ ಇಂತಹ ಕೆಲಸ ಮಾಡುವುದಕ್ಕೆ ಅವರ ಗಂಡ ಹಾಗೂ ಅತ್ತೆ ಮಾವ ಮನೆಯವರು ಸಹ ಅವರನ್ನು ಹೊರಹಾಕಿ ಕೈಬಿಟ್ಟಿದ್ದರೂ ತಮ್ಮ ಸ್ವ ಇಚ್ಛಾಶಕ್ತಿಯಿಂದ ಅನೇಕ ಅನಾಥ ಶವ ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿರುವ ಇವರು ರಾಮನಗರ ಜಿಲ್ಲೆಯಿಂದ ವಿಶೇಷ ಅತಿಥಿಯಾಗಿ ಬಂದಿದ್ದರು ಅವರಿಗೆ ಸಮಿತಿಯ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು. ಹಾಗೂ ಇವರ ಹೆಸರನ್ನು ಮುಂದಿನ ರಾಜ್ಯೋತ್ಸವ ಪ್ರಶಸ್ತಿಗೆ ಹೆಸರು ಸೂಚಿಸಲು ಶಾಸಕರು ಶಿಫಾರಸು ಮಾಡಬೇಕೆಂದು ಸಮೀತಿ ಸದಸ್ಯರು ಸೂಚಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಚಿಕ್ಕಪ್ಪ ಹಾದಿಮನಿ ವಹಿಸಿಕೊಂಡಿದ್ದರು, ಮಾಜಿ ಸೈನಿಕ ಎಂ ಡಿ ಚಿಕ್ಕಣ್ಣನವರು ಪ್ರಾಸ್ತಾವಿಕವಾಗಿ ಬ್ಯಾಡಗಿ ಮುಕ್ತಿಧಾಮದ ಇತಿಹಾಸ ತಿಳಿಸಿ ಅಲ್ಲಿರುವ ಮೂಲಭೂತ ಸೌಕರ್ಯದ ಅವ್ಯವಸ್ಥೆ ವಿವರಿಸಿ ಮಾತನಾಡಿದರು, ಶ್ರೀ ವಿಷ್ಣುಕಾಂತ ಬೆನ್ನೂರ ವಂದನಾರ್ಪಣೆ ಮಾಡಿದರು. ಶ್ರೀ ಶಂಕರ ಕುಸಗುರ ಅವರು ನಿರೂಪಣೆ ಮಾಡಿದರು.
ಸಮಾರಂಭದಲ್ಲಿ ಸಲಹಾ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಶಾಸಕ ಶ್ರೀ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಸುರೇಶ ಗೌಡ ಪಾಟೀಲ ,ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶ್ರೀ ರವಿ ಕೋರವರ ತಾಲೂಕ ತಹಸೀಲ್ದಾರರು, ಪುರಸಭೆ ಮುಖ್ಯ ಅಧಿಕಾರಿಗಳು, ಪುರಸಭೆಯ ಚುನಾಯಿತ ಸದಸ್ಯರು ಸುರೇಶ ಅಸಾದಿ, ಎಸ್ ಎನ್ ಯಮನಕ್ಕನವರ, ಕಲಾವತಿ ಬಡಿಗೇರ, ಪಕೀರಮ್ಮ ಚಲವಾದಿ, ಸುಭಾಸ ಮಾಳಗಿ, ರಾಮಣ್ಣ ಕೋಡಿಹಳ್ಳಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

4
25 views